ಗೆಳತಿ
ಗೆಳತಿ....
ಚಂದ್ರಮ ಒಮ್ಮೊಮ್ಮೆ ಕಾಣದಿರುವನು ಏಕೆ...
ಅವನಿಗೂ ಉಂಟು ನಾಚಿಕೆ, ಭಯ ಹೆದರಿಕೆ
ನಿನ್ನನ್ನು ಅವನಿಗೆ ಹೋಲಿಸಿದರೇನು ಗತಿ ಎಂದು
ಗೆಳತಿ...
ಕರ್ಣನಿಗೆ ಕೇಳಿದೆ ಸ್ನೇಹಕ್ಕೆಷ್ಟು ಬೆಲೆ ಕೊಡುವೆ...
ನಿನ್ನ ಮೊಗ ತೋರಿಸಿ ಹೇಳಿದ, ಇವಳಲ್ಲವೇ ಸ್ನೇಹಕ್ಕೆ ಒಡವೆ
ನಗುವಿಗೂ, ಅಳುವಿಗೂ ಜೊತೆಯಾಗಿರುವೆ ..
ಮನದಾಳದಲ್ಲಿ ಹೊಕ್ಕು ನೆಲೆಯಾಗಿರುವೆ...
ಗೆಳತಿ...
"ಚೈತ್ರ" ಮಾಸದಂತಿಹುದು ನಮ್ಮೀ ಸ್ನೇಹ
ಎಲ್ಲಿ ನೋಡಿದರಲ್ಲಿ ಹಸಿರು, ನವಿರು
ಹೀಗೆಯೇ ಇರಲೆಂದು ಆಶಿಸುವೆ,
ನಗು, ಸಂತಸ ನಿನ್ನೀ ಮುದ್ದು ಮುಖದಲ್ಲಿ