ಬಂಧಮುಕ್ತಿ
ಮನದ ಸೆರಮನೆಯ ಕೋಣೆಯಲ್ಲಿ ಬಂಧಿ ನಾನು
ನಾ ಮಾಡಿದ ತಪ್ಪೇನು ಎಂದು ಇಂದಿಗೂ ತಿಳಿದಿಲ್ಲ
ಪ್ರಿಯೆ ...
ಇನ್ನೆಷ್ಟು ದಿನಗಳ ಸೆರೆವಾಸ ನನಗೆ ???
ಬಿಡುಗಡೆಯೇ ಇಲ್ಲವೇ ಈ ನಿನ್ನ ಇನಿಯನಿಗೆ !!!!!
ಎಲ್ಲಿ ಹೋದವು ಆ ನಿನ್ನ ಮಧುರ ಮಾತುಗಳು
ಎಲ್ಲೆಂದು ಹುಡುಕಲಿ, ಈ ಅಂಧಕಾರದಲಿ
ಎತ್ತ ನೋಡಿದರೂ ಕತ್ತಲು ....
ಕುಳಿತು ಕಾಯುತ್ತಿರುವೆ ನಿನ್ನ ಕಣ್ಣಾಲಿಯ ಬೆಳಕಿಗಾಗಿ ...
ಈ ವಿರಹ ವೇದನೆಯ ವಿಮುಕ್ತಿಗಾಗಿ
No comments:
Post a Comment