Saturday, 13 December 2014

ಬಣ್ಣ

ನಾ ಬಣ್ಣ ಕಳಚಬೇಕು ...

ಹೋಗಲೊಲ್ಲದು ಹಗೆಯ ಬಣ್ಣ,
ಮಾಗಿದ ಮುಖದ ಮೇಲಿದೆ ಬಣ್ಣ... ಸುಡುತಿದೆ.
ತೊಳೆದು ತಿಕ್ಕಿದರೂ ಕರಗದು  ಬಣ್ಣ,
ಒಳ ನಿಂತ ಸತ್ಯಕ್ಕೆ ಗೋಡೆಯಾಗಿದೆ ಬಣ್ಣ... ಕಾಡುತಿದೆ.

ತಿರಿದು ನೀರ ತಂದೆ, ಸುಗಂಧದ್ರವ್ಯ ಮುಂದೆ,
ಪಟ್ಟನೆ ಕೂತ  ಬಣ್ಣ ಹರಿಯುತ್ತಿಲ್ಲ, ನನ್ನ ಬಿಡುತ್ತಿಲ್ಲ...
'ನಾನು' ಎಂಬುದ ಬಿಡದ ಹೊರತು ಬಣ್ಣ ಕದರಿ ಹೋಗದು,
ಕಣ್ಣ ನೀರ ಕರೆದೆ, 'ನನ್ನ' ನಾನು ತೊರೆದೆ..

ಬಣ್ಣ ಕಳಚಿದೆ... ನಾ ಬಣ್ಣ ಕಳಚಿದೆ 

No comments:

Post a Comment