Sunday, 22 June 2014

Amma

ಅಮ್ಮ 


ಅಮ್ಮ ... 
ಎಂಬೀ ಎರಡಕ್ಷರದ ಮಹಿಮೆಯೇನಮ್ಮ .... 
ನನ್ನದೆಷ್ಟು ಪ್ರೀತಿಸುವೆ, ಲಾಲಿಸುವೆ 
ನಿನ್ನ ಮಗುವಿನ ಹೊರತು ನಿನಗೆ ಪ್ರಪಂಚವೇ ಇಲ್ಲವೇ ???
ನನಗಾಗಿ ಮುಡಿಪಿಟ್ಟಿರುವೆ ನಿನ್ನ ಜೀವ 


ನೆನಪಿದೆಯಮ್ಮ ಇನ್ನೂ ... 

ಶಾಲೆಗೆ ಹೋಗದಿರಲು ನಾ ಮಾಡುತಿದ್ದ ಹಠ 
ಹೇಗೆ ಸಹಿಸುತ್ತಿದ್ದೆ ಈ ತುಂಟನ ಚೇಷ್ಟೆ 
ನನ್ನ ಹೊತ್ತು ತಿರುಗಿದೆ ಒಣ ಬಿಸಿಲಲ್ಲಿ 
'ಮಗುವಿಗೆ ಜ್ವರ' ಎನ್ನುವುದೊಂದೇ ಕಾರಣವಿಲ್ಲಿ 

ಅಮ್ಮ ... 
ನಾ ನಕ್ಕಾಗ ನಗುವೆ ... ಅತ್ತಾಗ ಅಳುವೆ 
ನನ್ನ ಸಂತೋಷದಿ ಜಗವನ್ನೇ ಕೊಳ್ಳುವೆ 
ಮರಕ್ಕೆ ಬೇರಿನ ತರಹ ಪುಷ್ಟಿ ನೀಡುವೆ 
ಈ ನನ್ನ ಬಾಳಿನ ಬೆಳಕಾಗಿರುವೆ








Monday, 16 June 2014

Maanaveeyate

ಮಾನವೀಯತೆ 


ನಡುಬೀದಿಯಲ್ಲಿ ಬಿದ್ದಿರುವ ಹೆಣದಂತಿರುವೆ
ಮೌನದಿ ಹೀಗೇ ಎಷ್ಟು ದಿನ ಮಲಗುವೆ
ಮಾನವೀಯತೆ ....
ನಿನಗೇನಾಗಿದೆ ??? ಯಾಕಿಷ್ಟು ಅರಾಜಕತೆ ???

ನಿನ್ನ ಮಗಳ ಮಾನ ಕಾಪಾಡಲು ನೀನು ಅಶಕ್ತ
ಧನದಾಹಿ ವೈದ್ಯನ ಭಕ್ತ
ಮಗುವಿನ ಪ್ರಾಣಕ್ಕಿಂತ ಹತ್ತಿರ ನಿನಗೆ ಕಾಂಚಾಣ
ಪ್ರೀತಿ... ವಿಶ್ವಾಸಕ್ಕೆ ಬಿಟ್ಟು ಕೊಂದಾಗಿದೆ ಬಾಣ

ಇನ್ನೂ ಮೌನದಿ ಮಲಗಿರುವ ಮಾನವೀಯತೆಯೇ ...
ಎಚ್ಚರವಾಗು ... ನಿನ್ನ ಈ ಜನರು ಸುಟ್ಟು ಹಾಕುವ  ಮುನ್ನ 

Wednesday, 11 June 2014

paristhithi

ಪರಿಸ್ಥಿತಿ 


ಕುಳಿತಿದ್ದೆ ನಾನು ಮರದಡಿ .... ಸುತ್ತ ಮುತ್ತಲ ಚೆಲುವ ಸವಿಯುತ.. 
ಹಕ್ಕಿ ಪಕ್ಷಿಗಳ ಕಲರವ... ಗಾಳಿಯ ಮಧುರ ನಿನಾದವ  ಆನಂದಿಸುತ ... 

ಕೇಳಿಸಿತು ಆರ್ತನಾದ "ಅಮ್ಮಾ" ಎಂದು ... 
ತಿರು ತಿರುಗಿ ನೋಡಿದರೂ ಕಾಣಿಸದು ಏನೊಂದೂ !!!!
ದೂರದ ದೃಶ್ಯವದು.... ಮುಸುಕಿದೆ ಮಂಜು  ... 
ಹೊರಟೆ ನಾ ... ಧ್ವನಿಯ ಜಾಡು ಹಿಡಿದು... 

ಬಿದ್ದು ಹೊರಳಾಡುತ್ತಿದೆ ಮುದಿ ಜೀವ ... 
ಮೈ ಮೇಲಿದೆ ಸಾವಿರಾರು ರಕ್ತದ ಕಲೆ ... 
ಅನಾಚಾರ, ಇರಿತ,ಹೊಡೆತ ತಿಂದಂತಿದೆ ಮೈಯಿನ ರೀತಿ 
ಆ ಮುದಿ ಜೀವದ ಹೆಸರು .. ಪ್ರೀತಿ !!!!

ನೋಡಿ ಸಹಿಸಲಾಗಲಿಲ್ಲ ... ಕಟ್ಟಿತು ಗಂಟಲು
ಪ್ರೀತಿಗೆ ಸಿಕ್ಕಿದೆ ಈ ಸ್ಥಿತಿ, 
ಅಹಂಭಾವ, ಜಾತಿ, ಜಂತುಗಳ ಹೊಡೆತಕ್ಕೆ ಸಿಕ್ಕಲು ... 
ಹಚ್ಚೋಣ ಎಂದು ತಂದಿರುವೆ ಮುಲಾಮು ... 
ಆದರೇನು ಮಾಡಲಿ 
ಪ್ರೀತಿಯೇ ಹೊಡೆಯುತ್ತಿದೆ ದ್ವೇಷಕ್ಕೆ ಸಲಾಮು !!!



Sunday, 8 June 2014

Am I Stupid

Am I Stupid!!!!!


Probably I am....

Even though the answer varied a little bit, many of them had the same jist in their reaction...

" You are a stupid guy...",

"I must say, you are emotionally stupid...",  

" Why do you act like this... stupid... "


when I listen these lines about me, I feel I need a reconstruction.. a serious reconstruction of the way I think, the way I behave. I did not know my words, my action meant " I am stupid ". I wonder, sometimes, Is a boy stupid if he stand firmly on the way he believe as right??? I recall words of my chap, " Oh.. man, you are way back in your ideologies... " Yeah.. If people say, sticking to a firm decision is something need to be modified according to "modern" ideology, I am glad that I don't follow that. But, If you repeatedly hear such lines... Okay, then something is wrong with you.. or everybody else are wrong!!!!!!

Oops... the second one is rare... Oh, then, something is wrong with me....  Yeah, I think I am a fool to expect light when every door is shut... But, it is common nature of human beings to expect things to happen. ..( Even when you know, it is almost impossible) .. Am I not a human being to have normal "human" like desires... Why am I an exception!!!

Okay, If you think, expecting good things in the worst situation is "foolish" yeah I am a fool.... sticking tight to my decision is "stupid", yeah I am stupid..



PS: Sorry, if you could not understand the background..


Wednesday, 4 June 2014

Musaladhaare

ಮುಸಲಧಾರೆ 

ಕಣ್ಣುಬಿಟ್ಟಡೆಯೆಲ್ಲ ನೀನೇ
ಏನಂದು ಹೇಳಲಿ ನನ್ನ ಭಾವನೆ
ಎಷ್ಟೆಂದು ಬಣ್ಣಿಸಲಿ....
ಅದೆಷ್ಟು ಹಿತ ನಿನ್ನ ಸಾಂಗತ್ಯ
ದಿನವಡೀ ನೋಡುತ್ತಾ ಇದ್ದು ಬಿಡಲೇ
ಈ ಮುದ್ದು ಚೆಲುವೆಯ????

ಆದರೇಕೋ ಭಯ ....
ನೀನೇಕೆ ಜೊತೆ ಕರೆತರುವೆ ಆ ನಿನ್ನ ಅಣ್ಣನನ್ನು
ಆತನಿಗೆ ನನ್ನ ಮೇಲಿದೆ ದ್ವೇಷ
ಗುಡುಗುವ ನನ್ನ ನೋಡಿದೊಡನೆ ಪ್ರತಿ ನಿಮಿಷ
ಆದರೆ ನಾನು ಬಿಟ್ಟೇನೇ ನಿನ್ನನ್ನು
ನೋಡುವುದ ಈ ಚೆಲುವೆಯ ನಡಿಗೆಯನ್ನು  ...

ನೀನಿಲ್ಲದೆ  ಹೇಗಿರಬಲ್ಲೆ ನಾನು
ನನ್ನೀ ಜೀವ ಕಾಯುತಿದೆ
ನಿನ್ನಂದಲೇ ನನಗೆ ದಿನದ ಕೂಳು
ನೀನೇ ಕೇಳಬೇಕು ನನ್ನ ಗೋಳು
ಭಗವಂತನ ಕೃಪೆ ಈ ನೀರೆ...
ಓ... ಮುಸಲಧಾರೆ