ಅಮ್ಮ
ಅಮ್ಮ ...
ಎಂಬೀ ಎರಡಕ್ಷರದ ಮಹಿಮೆಯೇನಮ್ಮ ....
ನನ್ನದೆಷ್ಟು ಪ್ರೀತಿಸುವೆ, ಲಾಲಿಸುವೆ
ನಿನ್ನ ಮಗುವಿನ ಹೊರತು ನಿನಗೆ ಪ್ರಪಂಚವೇ ಇಲ್ಲವೇ ???
ನನಗಾಗಿ ಮುಡಿಪಿಟ್ಟಿರುವೆ ನಿನ್ನ ಜೀವ
ನೆನಪಿದೆಯಮ್ಮ ಇನ್ನೂ ...
ಶಾಲೆಗೆ ಹೋಗದಿರಲು ನಾ ಮಾಡುತಿದ್ದ ಹಠ
ಹೇಗೆ ಸಹಿಸುತ್ತಿದ್ದೆ ಈ ತುಂಟನ ಚೇಷ್ಟೆ
ನನ್ನ ಹೊತ್ತು ತಿರುಗಿದೆ ಒಣ ಬಿಸಿಲಲ್ಲಿ
'ಮಗುವಿಗೆ ಜ್ವರ' ಎನ್ನುವುದೊಂದೇ ಕಾರಣವಿಲ್ಲಿ
ಅಮ್ಮ ...
ನಾ ನಕ್ಕಾಗ ನಗುವೆ ... ಅತ್ತಾಗ ಅಳುವೆ
ನನ್ನ ಸಂತೋಷದಿ ಜಗವನ್ನೇ ಕೊಳ್ಳುವೆ
ಮರಕ್ಕೆ ಬೇರಿನ ತರಹ ಪುಷ್ಟಿ ನೀಡುವೆ
ಈ ನನ್ನ ಬಾಳಿನ ಬೆಳಕಾಗಿರುವೆ
No comments:
Post a Comment