ಮುಸಲಧಾರೆ
ಕಣ್ಣುಬಿಟ್ಟಡೆಯೆಲ್ಲ ನೀನೇ
ಏನಂದು ಹೇಳಲಿ ನನ್ನ ಭಾವನೆ
ಎಷ್ಟೆಂದು ಬಣ್ಣಿಸಲಿ....
ಅದೆಷ್ಟು ಹಿತ ನಿನ್ನ ಸಾಂಗತ್ಯ
ದಿನವಡೀ ನೋಡುತ್ತಾ ಇದ್ದು ಬಿಡಲೇ
ಈ ಮುದ್ದು ಚೆಲುವೆಯ????
ಆದರೇಕೋ ಭಯ ....
ನೀನೇಕೆ ಜೊತೆ ಕರೆತರುವೆ ಆ ನಿನ್ನ ಅಣ್ಣನನ್ನು
ಆತನಿಗೆ ನನ್ನ ಮೇಲಿದೆ ದ್ವೇಷ
ಗುಡುಗುವ ನನ್ನ ನೋಡಿದೊಡನೆ ಪ್ರತಿ ನಿಮಿಷ
ಆದರೆ ನಾನು ಬಿಟ್ಟೇನೇ ನಿನ್ನನ್ನು
ನೋಡುವುದ ಈ ಚೆಲುವೆಯ ನಡಿಗೆಯನ್ನು ...
ನೀನಿಲ್ಲದೆ ಹೇಗಿರಬಲ್ಲೆ ನಾನು
ನನ್ನೀ ಜೀವ ಕಾಯುತಿದೆ
ನಿನ್ನಂದಲೇ ನನಗೆ ದಿನದ ಕೂಳು
ನೀನೇ ಕೇಳಬೇಕು ನನ್ನ ಗೋಳು
ಭಗವಂತನ ಕೃಪೆ ಈ ನೀರೆ...
ಓ... ಮುಸಲಧಾರೆ
No comments:
Post a Comment