ಮಾನವೀಯತೆ
ನಡುಬೀದಿಯಲ್ಲಿ ಬಿದ್ದಿರುವ ಹೆಣದಂತಿರುವೆ
ಮೌನದಿ ಹೀಗೇ ಎಷ್ಟು ದಿನ ಮಲಗುವೆ
ಮಾನವೀಯತೆ ....
ನಿನಗೇನಾಗಿದೆ ??? ಯಾಕಿಷ್ಟು ಅರಾಜಕತೆ ???
ನಿನ್ನ ಮಗಳ ಮಾನ ಕಾಪಾಡಲು ನೀನು ಅಶಕ್ತ
ಧನದಾಹಿ ವೈದ್ಯನ ಭಕ್ತ
ಮಗುವಿನ ಪ್ರಾಣಕ್ಕಿಂತ ಹತ್ತಿರ ನಿನಗೆ ಕಾಂಚಾಣ
ಪ್ರೀತಿ... ವಿಶ್ವಾಸಕ್ಕೆ ಬಿಟ್ಟು ಕೊಂದಾಗಿದೆ ಬಾಣ
ಇನ್ನೂ ಮೌನದಿ ಮಲಗಿರುವ ಮಾನವೀಯತೆಯೇ ...
ಎಚ್ಚರವಾಗು ... ನಿನ್ನ ಈ ಜನರು ಸುಟ್ಟು ಹಾಕುವ ಮುನ್ನ
No comments:
Post a Comment